ಲಂಚಕ್ಕೆ ಕೈಯೊಡ್ಡಿದ್ದ ಸಾರಿಗೆ ಅಧಿಕಾರಿಗಳು ಎಸಿಬಿ ಬಲೆಗೆ

ACB raids on NEKRTC officials, ಲಂಚಕ್ಕೆ ಕೈಯೊಡ್ಡಿದ್ದ ಸಾರಿಗೆ ಅಧಿಕಾರಿಗಳು ಎಸಿಬಿ ಬಲೆಗೆ

ಕಲಬುರಗಿ: ಡಿಪೋ ಮ್ಯಾನೇಜರ್ ಬಳಿ ಲಂಚ ಸ್ವೀಕರಿಸುತ್ತಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NEKRTC)ಯ ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಆಳಂದ ಡಿಪೋ ಮ್ಯಾನೇಜರ್ ಈಶ್ವರ್ ಮೇಲಿನ ಕೇಸ್​ಗಳನ್ನ ಕ್ಯಾನ್ಸಲ್ ಮಾಡೋಕೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಇಂದು ನಗರದ ಕೇಂದ್ರ ಬಸ್​ ನಿಲ್ದಾಣದ ಕಚೇರಿಯಲ್ಲಿ ಈಶ್ವರ್ ಬಳಿ 50 ಸಾವಿರ ಹಣ ಪಡೆಯಲು ಆರೋಪಿಗಳು ಮುಂದಾಗಿದ್ದರು. ಈ ವೇಳೆ ಎಸಿಬಿ ಎಸ್​ಪಿ ವಿ.ಎಂ.ಜ್ಯೋತಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಗ NEKRTC ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಡಿ.ಬಾವಿಕಟ್ಟಿ ಮತ್ತು ಸಂಚಾರಿ ನಿಯಂತ್ರಣಾಧಿಕಾರಿ ಜಯವಂತ್ ಎಂಬುವರು ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ACB raids on NEKRTC officials, ಲಂಚಕ್ಕೆ ಕೈಯೊಡ್ಡಿದ್ದ ಸಾರಿಗೆ ಅಧಿಕಾರಿಗಳು ಎಸಿಬಿ ಬಲೆಗೆ

ಪೆಟ್ಟಿ ಕೇಸ್​ ಕ್ಲಿಯರ್​ಗೆ 1 ಲಕ್ಷ ಡಿಮ್ಯಾಂಡ್: 
ಈಶ್ವರ್ ಮೇಲೆ ಸುಮಾರು 22 ಪೆಟ್ಟಿ ಕೇಸ್​ಗಳಿದ್ದವು. ಈ ಕೇಸ್​ಗಳು ಕ್ಲಿಯರ್ ಆದ್ರೆ ಡಿಪೋ ಮ್ಯಾನೇಜರ್ ಈಶ್ವರ್​ಗೆ ಪ್ರಮೋಷನ್ ಸಿಗುತ್ತಿತ್ತು. ಹೀಗಾಗಿ ಸಂಚಾರಿ ನಿಯಂತ್ರಣಾಧಿಕಾರಿ ಜಯವಂತ್ ಮುಖಾಂತರ ಎಸ್​.ಡಿ.ಬಾವಿಕಟ್ಟಿ ಒಂದು ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದಾರೆ. ಈ ಸಂಬಂಧ ಎಸಿಬಿ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Posts :

Leave a Reply

Your email address will not be published. Required fields are marked *