ಟ್ರಾಫಿಕ್​​ ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೇ ಎಗರಿಸಿದ ಕಿಲಾಡಿ ಕಳ್ಳ

ಬೆಂಗಳೂರು: ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೆ ಕಳ್ಳ ಕದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಅಶೋಕ್ ಗಜರೆ ಎಂಬಾತ ನೋ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದ. ಈ ಕಾರಣ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ ಪಿಸಿ ಮುಲ್ಲ ಮುಸ್ತಫಾ ಚಾಲಕನಿಗೆ ಫೈನ್ ಹಾಕಿದ್ದರು. ಇದರಿಂದ ಪೇದೆ ಮೇಲೆ ಸಿಟ್ಟಿಗೆದ್ದ ಅಶೋಕ್ ಗಜರೆ ಪೇದೆ ಮುಲ್ಲ ಮುಸ್ತಫಾರನ್ನ  ವೈಜಿ ಪಾಳ್ಯ ಪೊಲೀಸ್ ವಸತಿ ಗೃಹದವರೆಗೆ ಫಾಲೋ ಮಾಡಿದ್ದಾನೆ.

ನಂತರ ಪೇದೆ ಬೈಕ್ ನಿಲ್ಲಿಸಿ ಮನೆ ಒಳಗೆ ಹೋದ ಮೇಲೆ ಆಶೋಕ್ ವಾಕಿಟಾಕಿ ಸೇರಿ ಪೇದೆಯ ಬೈಕ್ ನಲ್ಲಿದ್ದ ಪೊಲೀಸ್ ರೇನ್ ಕೋಟ್, ಟ್ಯಾಬ್, ಮಾಸ್ಕ್ ಕದ್ದಿದ್ದಾನೆ. ಶಬ್ದ ಕೇಳಿ ಹೊರ ಬಂದ ಪೇದೆಗೆ ಕಳ್ಳ ಅಶೋಕ್ ‘ನಂಗೆ ಫೈನ್ ಹಾಕ್ತಿಯಾ..? ನಾನ್ಯಾರೆಂದು ತೋರಿಸ್ತೀನಿ’ ಎಂದು ಪೇದೆಗೆ ಆವಾಜ್ ಹಾಕಿ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related Posts :

Category:

error: Content is protected !!