ಕೆಪಿಎಲ್ ಸ್ಪಾಟ್ ಫಿಕ್ಸಿಂಗ್: ಕರ್ನಾಟಕದ ಸ್ಟಾರ್ ಆಟಗಾರರಿಬ್ಬರ ಬಂಧನ

CCB Arrest KPL Spot Fixing Players, ಕೆಪಿಎಲ್ ಸ್ಪಾಟ್ ಫಿಕ್ಸಿಂಗ್: ಕರ್ನಾಟಕದ ಸ್ಟಾರ್ ಆಟಗಾರರಿಬ್ಬರ ಬಂಧನ

ಬೆಂಗಳೂರು: ಕೆಪಿಎಲ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಬ್ಬರು ಪ್ರಮುಖ ಆಟಗಾರರನ್ನು ಬಂಧಿಸಿದ್ದಾರೆ.

2019 ರಲ್ಲಿ ನಡೆದ ಬಳ್ಳಾರಿ ಟಸ್ಕರ್ಸ್ – ಹಬ್ಬಳ್ಳಿ ಟೈಗರ್ಸ್ ನಡುವಿನ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನೆಡೆಸಿದ್ದಾರೆ ಎಂಬ ಆರೋಪದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ ಗೌತಮ್ ಹಾಗೂ ಅಬ್ರಾರ್ ಖಾಜಿ ಬಂಧಿಸಲಾಗಿದೆ. ಮಂದಗತಿಯ ಬ್ಯಾಟಿಂಗ್ ನೆಡೆಸಲು ಇಬ್ಬರು ಆಟಗಾರರು 20 ಲಕ್ಷ ಹಣ ಪಡೆದಿದ್ದು, ಬೆಂಗಳೂರು ವಿರುದ್ಧದ ಮತ್ತೊಂದು ಪಂದ್ಯದಲ್ಲೂ ಫಿಕ್ಸಿಂಗ್ ನೆಡೆಸಿದ್ದರು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿದೆ.
CCB Arrest KPL Spot Fixing Players, ಕೆಪಿಎಲ್ ಸ್ಪಾಟ್ ಫಿಕ್ಸಿಂಗ್: ಕರ್ನಾಟಕದ ಸ್ಟಾರ್ ಆಟಗಾರರಿಬ್ಬರ ಬಂಧನ
ಬಂಧಿತ ಆಟಗಾರ ಸಿಎಂ ಗೌತಮ್ ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದರು. ಆರ್ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿರುವ ಇವರು ಪ್ರಸಕ್ತ ಸಾಲಿನಲ್ಲಿ ಗೋವಾ ಪರ ಆಡುತ್ತಿರುವ ಆಟಗಾರನಾಗಿದ್ದಾನೆ. 2012-13 ನೇ ಸಾಲಿನ ರಣಜಿ ಋತುವಿನಲ್ಲಿ ರಾಜ್ಯದ ಪರ ಅತೀ ಹೆಚ್ಚು ರನ್ ಗಳಿಸಿದ್ದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ದರು. ಅದೇ ಪ್ರದರ್ಶನದ ಆಧಾರದಲ್ಲಿ ಇಂಡಿಯಾ ಎ ತಂಡವನ್ನೂ ಪ್ರತಿನಿಧಿಸಿದ್ದರು ಆದರೆ ಈಗ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಮತ್ತೊಬ್ಬ ಬಂಧಿತ ಆಟಗಾರ ಅಬ್ರಾರ್ ಖಾಜಿ ಸದ್ಯ ಮಿಝೋರಮ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ.

ಈಗಾಗಲೇ ಬೆಳಗಾವಿ ಪ್ಯಾಂಥರ್ಸ್​ ತಂಡದ ಮಾಲೀಕ ಅಶ್ಪಕ್ ಅಲಿ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಕೋಚ್ ವಿಶ್ವನಾಥ್​, ಬೆಂಗಳೂರು ತಂಡದ ಆಟಗಾರ ವಿನುಪ್ರಸಾದ್ ಹಾಗೂ ಡ್ರಮ್ಮರ್​ ಭವೇಶ್​ನನ್ನು, ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಿಶಾಂತ್ ಶೇಕಾವತ್​ನನ್ನು ಬಂಧಿಸಿದ್ದರು. ಇದೀಗ ಕರ್ನಾಟಕದ ಸ್ಟಾರ್ ಆಟಗಾರರಾಗಿರುವ ಸಿ.ಎಂ ಗೌತಮ್ ಹಾಗೂ ಅಬ್ರಾರ್ ಖಾಜಿ ಬಂಧಿಸಿದ್ದಾರೆ.

7 ದಿನ ಸಿಸಿಬಿ ಕಸ್ಟಡಿಗೆ
ಸಿ.ಎಂ.ಗೌತಮ್ ಹಾಗೂ ಅಬ್ರಾರ್ ಖಾಜಿ ಅವರನ್ನು ನವೆಂಬರ್ 13ರವರೆಗೆ ಅಂದ್ರೆ 7 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ 30ನೇ ಎಸಿಎಂಎಂ ಕೋರ್ಟ್​ ಆದೇಶಿಸಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!