ಡಿಕೆ ಶಿವಕುಮಾರ್ ಶೀಘ್ರವೇ ಬೆಳಗಾವಿಗೆ ಬರ್ತಾರೆ, ಯಾಕೆ ಗೊತ್ತಾ?

DK Shivakumar to visit belagavi says lakshmi hebbalkar, ಡಿಕೆ ಶಿವಕುಮಾರ್ ಶೀಘ್ರವೇ ಬೆಳಗಾವಿಗೆ ಬರ್ತಾರೆ, ಯಾಕೆ ಗೊತ್ತಾ?

ಬೆಳಗಾವಿ: ಜೈಲಿನಿಂದ ಹೊರಬಂದಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಮಾಜಿ ಸಚಿವ ಡಿಕೆಶಿಗೆ ಬೇಲ್ ಸಿಗುವಂತೆ ಬೆಳಗಾವಿಯ ಕಾರ್ಯಕರ್ತರು, ಅಭಿಮಾನಿಗಳು ಪ್ರಾರ್ಥನೆ, ಪೂಜೆ ಜತೆಗೆ ಹರಕೆ ಹೊತ್ತಿಕೊಂಡಿದ್ದರು. ಹರಕೆ ತೀರಿಸಲು ಶೀಘ್ರವೇ ಮಾಜಿ ಸಚಿವ ಡಿಕೆಶಿ ಬರಲಿದ್ದಾರೆ ಎಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

ಡಿಕೆಶಿ ಬಿಡುಗಡೆಯಿಂದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ. ಅವರು ಹೋದಲೆಲ್ಲ ಸಿಗುತ್ತಿರುವ ರೆಸ್ಪಾನ್ಸ್ ನೋಡಿದ್ರೆ ಗೊತ್ತಾಗುತ್ತೆ. ಶೀಘ್ರವೇ ಮಾಜಿ‌ ಸಚಿವ ಡಿಕೆಶಿ ಬೆಳಗಾವಿಗೂ ಆಗಮಿಸಲಿದ್ದಾರೆ ಎಂದು ಹೆಬ್ಬಾಳ್ಕರ್ ಸುದ್ದಿಗಾರರಿಗೆ ತಿಳಿಸಿದರು.

ಉಪಚುನಾವಣೆಯಲ್ಲಿ ಅಥಣಿ ಕ್ಷೇತ್ರದ ‌ಉಸ್ತುವಾರಿ ವಹಿಸಿದ್ದಾರೆ. ಪಕ್ಷವು ವಹಿಸಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಕ್ಷೇತ್ರದಲ್ಲಿ ಸಂಚರಿಸಿ ನಾನು ನನ್ನ ರೋಲ್ ಪ್ಲೇ ಮಾಡುತ್ತೇನೆ ಎಂದು ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್ ಇದೇ ಸಂದರ್ಭದಲ್ಲಿ ಹೇಳಿದರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!