ಹೊಟ್ಟೆಯಲ್ಲಿ ಕೀವು, ಹೊಟ್ಟೆ ಒಡೆಯಬಹುದು.. ವಿಕ್ಟೋರಿಯಾದಲ್ಲಿ ರೋಗಿ ನರಳಾಟ!

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಕುದರೆಗೆರೆ ಕಾಲೋನಿಯ ಬಡ ದಂಪತಿ ಒಬ್ಬರು ಚಿಕಿತ್ಸೆಗೆ ಎಂದು ಬಂದಿದ್ದಾರೆ ಆದರೆ ಅವರ ಬಳಿ ಹಣವಿಲ್ಲದ ಕಾರಣ ವೈದ್ಯರು ದುಡ್ಡು ಕೊಟ್ಟರಷ್ಟೇ ಚಿಕಿತ್ಸೆ ಎನ್ನುತ್ತಿದ್ದಾರೆ. ಹೊಟ್ಟೆಯಲ್ಲಿ ಕೀವು ಕಟ್ಟಿದ ಪತ್ನಿಗೆ ಚಿಕಿತ್ಸೆ ಕೊಡಿಸಲು ಪತಿ ಪರದಾಡುತ್ತಿದ್ದಾರೆ. ಇಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೋಗಿಯನ್ನು ಕಂಡರೂ ಯಾವ ವೈದ್ಯರು ಚಿಕಿತ್ಸೆಕೊಡಲು ಮುಂದಾಗುತ್ತಿಲ್ಲ.

ಹೊಟ್ಟೆಯಲ್ಲಿ ಕೀವು ಕಟ್ಟಿದೆ, ಯಾವ ಸಮಯದಲ್ಲಿ ಆದ್ರೂ ಹೊಟ್ಟೆ ಒಡೆಯಬಹುದು ಮೂರು ಬಾಟೆಲ್ ರಕ್ತ ಬೇಕಿದೆ ಆದರೆ ಹಣವಿಲ್ಲ ಚಿಕಿತ್ಸೆ ಕೊಡಿ ಎಂದರೆ ಡಾಕ್ಟರ್ಸ ತಲೆಕೆಡಿಸಿಕೊಳ್ಳುತ್ತಿಲ್ಲ. ಖಾಸಾಗಿ ಆಸ್ಪತ್ರೆ ರೀತಿಯಲ್ಲಿ ವಿಧಿಸುವಷ್ಟು ದರ ನಿಗದಿ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲೇ ಬಿಪಿಎಲ್ ಕಾರ್ಡ್ ಇದ್ದರೂ ಚಿಕಿತ್ಸೆ ಸಿಗ್ತಿಲ್ಲ. ಬೆಳಗ್ಗೆ 5 ಗಂಟೆಯಿಂದ ಚಿಕಿತ್ಸೆ ಸಿಗದೆ ಸಿದ್ಧಮ್ಮ ಎಂಬ ರೋಗಿ ನರಳಾಡುತ್ತಿದ್ದಾರೆ.

ನೆರವಿಗೆ ಧಾವಿಸಿದ ಸಹೃದಯಿ:
ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಹೊಟ್ಟೆ ನೋವಿನಿಂದ ಬಳಲುತಿದ್ದ ಸಿದ್ದಮ್ಮ ಅವರ ಪರದಾಟವನ್ನು ಟಿವಿ ಮಾಧ್ಯಮದಲ್ಲಿ ನೋಡಿದ ಸಹೃದಯಿಯೊಬ್ಬರು ಅವರ ನೆರವಿಗೆ ಧಾವಿಸಿದ್ದಾರೆ.

ವಿಜಯನಗರ ನಿವಾಸಿ ಚಂದ್ರಶೇಖರ್ ತಮ್ಮ‌ ಕೈಲಾದ ಸಹಾಯ ಮಾಡಿದ್ದಾರೆ. ಸಿದ್ದಮ್ಮ ಚಿಕಿತ್ಸೆಗೆ ಚಂದ್ರಶೇಖರ್ ಧನ ಸಹಾಯ ಮಾಡಿದ್ದಾರೆ. ಧನ ಸಹಾಯದಿಂದ ಸಿದ್ದಮ್ಮ ಅವರ ಹೊಟ್ಟೆ ನೋವಿನ ಚಿಕಿತ್ಸೆಗೆ ಸಹಾಯವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

Related Posts :

Category:

error: Content is protected !!