ಅಣ್ಣ ಶಿವಕುಮಾರ್ ಜೊತೆಜೊತೆಗೆ ತಮ್ಮ ಡಿಕೆ ಸುರೇಶ್ ಸಹ ಲಾಕ್?

, ಅಣ್ಣ ಶಿವಕುಮಾರ್ ಜೊತೆಜೊತೆಗೆ ತಮ್ಮ ಡಿಕೆ ಸುರೇಶ್ ಸಹ ಲಾಕ್?

, ಅಣ್ಣ ಶಿವಕುಮಾರ್ ಜೊತೆಜೊತೆಗೆ ತಮ್ಮ ಡಿಕೆ ಸುರೇಶ್ ಸಹ ಲಾಕ್? ದೆಹಲಿ: ಕಾಂಗ್ರೆಸ್​ ಪಕ್ಷದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕರ್ನಾಟಕ ಬಿಟ್ಟು ದೆಹಲಿಯಲ್ಲಿ ಇ.ಡಿ ಅಂಗಳ ತಲುಪಿ ಇಂದಿಗೆ ಸರಿಯಾಗಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್ ಅವರ ಸೋದರ ಡಿ.ಕೆ.ಸುರೇಶ್​ಗೂ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದೆ. ಕಳೆದೊಂದು ತಿಂಗಳಿಂದ ದಿಲ್ಲಿಯಲ್ಲಿ ಅಣ್ಣನಿಗೆ ನೆರಳಾಗಿ ನಿಂತಿರುವ ಸುರೇಶ್​ಗೂ ಈಗ ಇ.ಡಿ ಕಾಟ ಶುರುವಾಗಿದೆ. ಈ ಮಧ್ಯೆ ತಿಹಾರ್ ಜೈಲಿನಲ್ಲಿರುವ ಶಿವಕುಮಾರ್ ಅವರ ಜಾಮೀನು ಅರ್ಜಿ​ ವಿಚಾರಣೆಯನ್ನು ದೆಹಲಿ ಕೋರ್ಟ್ ಮುಂದೂಡಿದ್ದು, ಅಕ್ಟೋಬರ್ 14ರವರೆಗೂ ಡಿಕೆಶಿಗೆ ಜೈಲೇ ಗತಿಯಾಗಿದೆ.

, ಅಣ್ಣ ಶಿವಕುಮಾರ್ ಜೊತೆಜೊತೆಗೆ ತಮ್ಮ ಡಿಕೆ ಸುರೇಶ್ ಸಹ ಲಾಕ್? ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್​ಗೆ ಇ.ಡಿಯಿಂದ ನೋಟಿಸ್ ಬಂದಿದ್ದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಲೋಕಸಭೆ ಚುನಾವಣೆ ವೇಳೆ ಅಫಿಡವಿಟ್​ನಲ್ಲಿ 338 ಕೋಟಿ ರೂ. ಆಸ್ತಿ ​ ಘೋಷಿಸಿಕೊಂಡಿದ್ದರು. ತಂದೆ ಕೆಂಪೇಗೌಡ ಆಸ್ತಿ ಸಹ ಸುರೇಶ್ ಹೆಸರಿಗೆ ವರ್ಗಾವಣೆಯಾಗಿದೆ. ಶಿವಕುಮಾರ್ ಪುತ್ರಿ ಐಶ್ವರ್ಯಾಗೆ ಸುರೇಶ್​ ಸಾಲ ನೀಡಿದ್ದಾರೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸುರೇಶ್​ಗೆ ನೋಟಿಸ್ ನೀಡಿದೆ.

Related Posts :

Leave a Reply

Your email address will not be published. Required fields are marked *