ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ

SPG security withdrawn to Gandhi family, ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ

ದೆಹಲಿ: ಇಂದಿನಿಂದಲೇ ಸೋನಿಯಾ ಗಾಂಧಿ ಮತ್ತು ಅವರ ಇಬ್ಬರು ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ರಕ್ಷಣೆಯನ್ನು ಹಿಂಪಡೆಯಲಾಗಿದೆ. ಎಐಸಿಸಿ ಹಂಗಾಮಿ ಅಧ್ಯಕ್ಷೆಯಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ನೆಲೆಸಿರುವ 10 ಜನಪತ್ ನಿವಾಸದ ಬಳಿ ಈಗಾಗಲೇ ಸಿಆರ್​ಪಿಎಫ್​ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಗಾಂಧಿ ಪರಿವಾರಕ್ಕೆ ಸಿಆರ್​ಪಿಎಫ್​ನ Z+ ಸೆಕ್ಯೂರಿಟಿಯನ್ನು ನೀಡಲಾಗಿದೆ.

ಪ್ರಧಾನಿ ಮೋದಿಗೆ ಮಾತ್ರ SPG ಸೆಕ್ಯೂರಿಟಿ:
SPG security withdrawn to Gandhi family, ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ
28 ವರ್ಷಗಳಿಂದ ಗಾಂಧಿ ಪರಿವಾರಕ್ಕೆ ಎಸ್​ಪಿಜಿ ಭದ್ರತೆಯನ್ನು ನೀಡಲಾಗುತ್ತಿತ್ತು. ಈಗ ಅವರಿಗೂ ಎಸ್​ಪಿಜಿ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಇದೀಗ ದೇಶದಲ್ಲಿ ಎಸ್​ಪಿಜಿ ರಕ್ಷಣೆಯನ್ನು ಹೊಂದಿರುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ.

ಗಾಂಧಿ ಕುಟುಂಬಕ್ಕೆ ಬೆದರಿಕೆ ಇಲ್ಲ:
ಗಾಂಧಿ ಪರಿವಾರಕ್ಕೆ ಈಗ ಯಾವುದೇ ಬೆದರಿಕೆ ಇಲ್ಲ. ಇತ್ತೀಚೆಗೆ ಎಲ್ಲಾ ಭದ್ರತಾ ಏಜೆನ್ಸಿಗಳಿಂದ ಅಭಿಪ್ರಾಯವನ್ನು ಪಡೆದ ಬಳಿಕ ಎಸ್​ಪಿಜಿ ರಕ್ಷಣೆಯನ್ನು ವಾಪಸ್ ಪಡೆಯುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. SPG security withdrawn to Gandhi family, ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ

ಗಾಂಧಿ ಕುಟುಂಬಕ್ಕೆ ಧಕ್ಕೆಯಾಗಲ್ಲ:
ಎಸ್​ಪಿಜಿ (Special Protection Group) ದೇಶದಲ್ಲಿಯೇ ಅತ್ಯುನ್ನತ ಶ್ರೇಣಿಯ ಭದ್ರತೆಯನ್ನು ಹೊದಗಿಸುವ ಸಂಸ್ಥೆಯಾಗಿದೆ. SPG ಭದ್ರತೆಯನ್ನು ಹಿಂಪಡೆಯುವುದರಿಂದ ಯಾವುದೇ ಕಾರಣಕ್ಕೂ ಗಾಂಧಿ ಕುಟುಂಬದ ಭದ್ರತೆಗೆ ಧಕ್ಕೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಗಾಂಧಿ ಪರಿವಾರಕ್ಕೆ 28 ವರ್ಷಗಳಿಂದ ಈ ಎಸ್​ಪಿಜಿ ರಕ್ಷಣೆಯನ್ನು ನೀಡಲಾಗುತ್ತಿದೆ. 1988ರ ಎಸ್​ಪಿಜಿ ಕಾಯ್ದೆ ಅಡಿ 1991 ಸೆಪ್ಟೆಂಬರ್​ ತಿಂಗಳಿಂದ ವಿವಿಐಪಿ ಸೆಕ್ಯೂರಿಟಿ ಕೊಡಲಾಗುತ್ತಿತ್ತು.

ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ:
ಇಷ್ಟು ದಿನ ಹಗಲಿರುಳು ಶ್ರಮಿಸಿ ರಕ್ಷಿಸಿದ ಎಸ್​ಜಿಪಿ ಸಹೋದರ ಮತ್ತು ಸಹೋದರಿಯರೇ ಧನ್ಯವಾದ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

SPG security withdrawn to Gandhi family, ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ SPG security withdrawn to Gandhi family, ಇಂದಿನಿಂದಲೇ ಸೋನಿಯಾ-ರಾಹುಲ್ SPG ತೆಗೆದುಹಾಕಿದ ಕೇಂದ್ರ

 

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!