ಡಿಕೆ ಶಿವಕುಮಾರ್ ಭೇಟಿಗೆ ರೇವಣ್ಣಗೂ ಸಿಗಲಿಲ್ಲ ಅವಕಾಶ, ಯಾಕೆ?

, ಡಿಕೆ ಶಿವಕುಮಾರ್ ಭೇಟಿಗೆ ರೇವಣ್ಣಗೂ ಸಿಗಲಿಲ್ಲ ಅವಕಾಶ, ಯಾಕೆ?

ದೆಹಲಿ: ಹೆಚ್​.ಡಿ.ದೇವೇಗೌಡರು ಬಿಟ್ಟರೆ ಡಿ.ಕೆ.ಶಿವಕುಮಾರ್ ಮತ್ತು ಹೆಚ್​.ಡಿ.ಕುಮಾರಸ್ವಾಮಿ ನಮ್ಮ ಸಮಾಜದ ನಾಯಕರು ಎಂದು ದೆಹಲಿಯಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ತಂದೆಯ ಪುಣ್ಯತಿಥಿಗೆ ಹೋಗೋದಕ್ಕೂ ಇಡಿ ಅಧಿಕಾರಿಗಳು ಬಿಟ್ಟಿಲ್ಲ. ಇದನ್ನ ನೋಡ್ತಿದ್ರೆ ಏನೋ ತುರ್ತು ಪರಿಸ್ಥಿತಿ ಇದೆ ಅನ್ನಿಸುತ್ತೆ. ನಮ್ಮ ಸಮಾಜದಲ್ಲಿ ಪುಣ್ಯತಿಥಿ ಮಾಡೋದು ಪ್ರಮುಖ. ಈ ಪುಣ್ಯತಿಥಿಗೆ ಅವಕಾಶ ಕೊಟ್ಟಿಲ್ಲ ಅಂದ್ರೆ ಏನು ಹೇಳೋದು. ಡಿಕೆಶಿಯವರನ್ನು ಅಂದು ಬಿಟ್ಟಿದ್ದರೆ ಅವರೇನು ಓಡಿ ಹೋಗುತ್ತಿದ್ದರಾ? ಎಂದು ಅಧಿಕಾರಿಗಳ ವಿರುದ್ಧ ಹೆಚ್​.ಡಿ.ರೇವಣ್ಣ ಕಿಡಿಕಾರಿದ್ದಾರೆ.

ಡಿಕೆಶಿ ಜೊತೆ ನಾವಿದ್ದೇವೆ:
ಡಿ.ಕೆ.ಶಿವಕುಮಾರ್​ ಕಾನೂನಿಗೆ ತಲೆಬಾಗ್ತೀನಿ ಅಂದಿದ್ದರು‌. ಡಿ.ಕೆ.ಶಿವಕುಮಾರ್ ಧೃತಿಗೆಡಬೇಕಿಲ್ಲ, ಅವರ ಜೊತೆ ನಾವು ಇದ್ದೇವೆ. ನಾನು ನಿರಂತರವಾಗಿ ಡಿ.ಕೆ.ಸುರೇಶ್​ ಸಂಪರ್ಕದಲ್ಲಿದ್ದೇನೆ. ಇಂದು ಡಿಕೆ ಶಿವಕುಮಾರ್ ಅವರನ್ನ ನೋಡೋಕೆ ಹೋಗಬೇಕಿತ್ತು. ಆದ್ರೆ ತಿಹಾರ್​ ಜೈಲಿನ ನಿಯಮದ ಪ್ರಕಾರ ಭೇಟಿ ಮಾಡೋಕೆ ಆಗಲಿಲ್ಲ. ದೇವರ ದಯೆಯಿಂದ ಡಿಕೆಶಿ ಬಿಡುಗಡೆ ಆಗಲಿ ಎಂದರು.

ಉಪ್ಪು ತಿಂದವರು ನೀರು ಕುಡಿಯಬೇಕು ಹೇಳಿಕೆಗೆ ಆಕ್ರೋಶ:
ಡಿಕೆಶಿ ವಿಚಾರದಲ್ಲಿ ‘ಉಪ್ಪು ತಿಂದವರು ನೀರು ಕುಡಿಯಬೇಕು’ ಎಂಬ ಬಿಜೆಪಿ ನಾಯಕರ ಹೇಳಿಕೆ ಸರಿಯಲ್ಲ. ಕೆಳದ ಒಂದು ತಿಂಗಳನಿಂದ ನಡೆದ ಬೆಳವಣಿಗೆ ಗಮನಿಸಿದ್ದೇನೆ. ದ್ವೇಷದ ರಾಜಕಾರಣ ಇಲ್ಲ ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಎಲ್ಲವನ್ನ ನೋಡಿದ್ರೆ ಸಮಾಜ ಯಾವ ಕಡೆ ಹೋಗುತ್ತಿದೆ ಅಂತ ಅನಿಸ್ತಿದೆ. ಈ ರೀತಿ ಹೇಳಿಕೆ ಕೊಡೋದು ಸೂಕ್ತವಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹೆಚ್​ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ರಾಜಕಾರಣ ಯಾವತ್ತೂ ಶಾಶ್ವತ ಅಲ್ಲ, ಇಲ್ಲಿ ಕಾಂಗ್ರೆಸ್-ಜೆಡಿಎಸ್ ಅನ್ನೋ ಪ್ರಶ್ನೆ ಬರೋದಿಲ್ಲ. ಕಷ್ಟದಲ್ಲಿದ್ದಾಗ ನಾವು ಸ್ಪಂದಿಸುವುದು ನಮ್ಮ ಧರ್ಮ ಎಂದರು.

 

Related Posts :

Leave a Reply

Your email address will not be published. Required fields are marked *