ಜಮ್ಮು ಕಾಶ್ಮೀರ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿ ಇಂದಿನಿಂದ ಅಸ್ತಿತ್ವಕ್ಕೆ

ದೆಹಲಿ: ಅನುಚ್ಛೇದ 370 ರದ್ದಾದ ಬಳಿಕ ಜಮ್ಮು-ಕಾಶ್ಮೀರ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿದೆ. ಇಂತಾ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಇಂದು ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬರಲಿದೆ. ದೇಶದೆಲ್ಲೆಡೆ ಅನ್ವಯವಾಗೋ ಕಾಯ್ದೆಗಳು ಇಂದಿನಿಂದ ಕಣಿವೆ ರಾಜ್ಯದಲ್ಲೂ ಆಗಲಿದೆ.

ಆರ್ಟಿಕಲ್‌ 370 ರದ್ದುಗೊಳಿಸಿ ಕೇಂದ್ರ ಸರ್ಕಾರ ಭಾರತೀಯರ ಬಹುದಿನಗಳ ಕನಸನ್ನ ನನಸು ಮಾಡಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನ ರದ್ದುಗೊಳಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನನ್ನ ಎರಡು ಭಾಗಗಳಾಗಿ ಮಾಡಿದೆ. ಹೀಗೆ ಎರಡು ಭಾಗವಾಗಿರುವ ಲಡಾಖ್ ಮತ್ತು ಜಮ್ಮು ಕಾಶ್ಮೀರ ಇವತ್ತಿನಿಂದ ಅಧಿಕೃತವಾಗಿ ಕೇಂದ್ರಾಡಳಿತಕ್ಕೆ ಸೇರಲಿದೆ..

ಸರ್ದಾರ್ ಬರ್ತ್‌ಡೇಗೆ 2 ಕೇಂದ್ರಾಡಳಿತ ಪ್ರದೇಶ ಗಿಫ್ಟ್​!
ಇಂದಿನಿಂದ ಒಂದು ರಾಜ್ಯ ಕಡಿಮೆಯಾಗಿ, ಎರಡು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಾಗಲಿವೆ. ಇಂದಿನಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಅಧಿಕೃತವಾಗಿ ಎರಡು ಕೇಂದ್ರಾಡಳಿತ ಪ್ರದೇಶವಾಗಲಿದೆ. ಶ್ರೀನಗರ ಮತ್ತು ಲೇಹ್​ನಲ್ಲಿ ಉಪ ರಾಜ್ಯಪಾಲರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಮೊದಲು ಶ್ರೀನಗರದಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ ಗೀತಾ ಮಿತ್ತಲ್, ಜಿ.ಸಿ.ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದಾದ ಬಳಿಕ ಲೇಹ್​ಗೆ ತೆರಳಿ, ರಾಧಾಕೃಷ್ಣ ಮಾಹೌರ್​ಗೆ ಪ್ರಮಾಣ ವಚನ ಬೋಧಿಸ್ತಾರೆ.

ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಧಾ ಕೃಷ್ಣ ಮಾಥುರ್ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಲಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಯಾವುದೇ ವಿಧಾನಸಭೆ ಇಲ್ಲ. ಕೇಂದ್ರ ಗೃಹ ಸಚಿವಾಲಯವೇ ಲೆಫ್ಟಿನೆಂಟ್ ಗವರ್ನರ್ ಮೂಲಕ ನೇರವಾಗಿ ಆಡಳಿತ ನಡೆಸುತ್ತದೆ. ಇನ್ನು ಕಾಶ್ಮೀರದಲ್ಲಿ ವಿಧಾನಸಭೆ ಇರಲಿದ್ದು, ದೆಹಲಿ ಮಾದರಿಯಲ್ಲಿ ಆಡಳಿತ ಕೆಲಸ ಮಾಡಲಿದೆ.

ದೇಶದೆಲ್ಲೆಡೆ ಅನ್ವಯವಾಗೋ ಕಾಯ್ದೆಗಳು ಇಂದಿನಿಂದ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗಲಿದೆ. ಹೊಸದಾಗಿ 166 ರಾಜ್ಯ ಕಾಯ್ದೆಗಳು ಅಸ್ತಿತ್ವಕ್ಕೆ ಬರಲಿದ್ದು, 156 ಹಳೇ ಕಾಯ್ದೆಗಳು ರದ್ದಾಗಲಿವೆ. ಇವತ್ತು ಭಾರತದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನವಾಗಿದೆ. ಈ ವೇಳೆ ದೇಶದ ಜನರಿಗೆ ಕೇಂದ್ರ ಸರ್ಕಾರ 2 ಕೇಂದ್ರಾಡಳಿತ ಪ್ರದೇಶಗಳ ಗಿಫ್ಟ್​ ನೀಡಿದೆ.

Related Posts :

Category:

error: Content is protected !!