ಬ್ಯೂಟಿಫುಲ್ ಆಗಿ ಕಾಣಲು ಇವುಗಳನ್ನು ಬಳಸ್ತಾರಂತೆ ಈ ಮಲೆಯಾಳಂ ನಟಿ

ಮಲೆಯಾಳಂ ಕಿರುತೆರೆಯಲ್ಲಿ ನಟನೆಯ ಓಂಕಾರ ಕಲಿತು ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭಾವಂತ ನಟಿ ನಮಿತಾ ಪ್ರಮೋದ್‌. ಈಗ ಮಾತೃಭಾಷೆಯೊಂದಿಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಬಹುಬೇಡಿಕೆಯ ನಟಿ.

ಬಣ್ಣದ ಲೋಕದ ಆಕರ್ಷಣೆ ಇವರನ್ನು ಸೌತ್ ಸಿನಿರಂಗದ ಸ್ಟಾರ್ ಆಗುವಂತೆ ಮಾಡಿದೆ. 2006ರಿಂದ 2010ರವರೆಗೂ ನಿರಂತರವಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡ ನಮಿತಾ, ಮಲೆಯಾಳಿಗಳ ಮನೆಮಾತಾದ ಬೆಡಗಿ. 2014ರಲ್ಲಿ ಪದವಿ ಮುಗಿಸುವ ಹೊತ್ತಿಗೆ ಮಲೆಯಾಳಂ ಚಿತ್ರರಂಗದ ಮುದ್ದಿನ ಕಣ್ಮಣಿಯೂ ಆಗಿಬಿಟ್ಟಿದ್ದರು ಈ ಚೆಲುವೆ. 

‘ಅಮರ್‌ ಅಕ್ಬರ್‌ ಅಂತೋನಿ’ ಚಿತ್ರದಲ್ಲಿ ನೃತ್ಯಗಾರ್ತಿಯಾಗಿ ಇವರು ನಟಿಸಿದ ಪರಿ ಮರೆಯಲು ಅಸಾಧ್ಯ. ಚಿತ್ರರಂಗದ ಜೊತೆ ಜೊತೆಗೆ ನಮಿತಾ ಜಾಹೀರಾತು ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಫ್ಯಾಷನ್‌ ಮತ್ತು ಟ್ರೆಂಡ್‌ ಮಾತು ಬಂದಾಗ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ತಾರೆ ನಮಿತಾ. ಅದಕ್ಕಾಗಿ ತಮ್ಮ ಪ್ರತಿ ಚಿತ್ರದಲ್ಲಿಯೂ ಉಡುಗೆ ತೊಡುಗೆಗಳು ವಿಭಿನ್ನ ಮತ್ತು ಅತ್ಯಾಕರ್ಷಕವಾಗಿರಬೇಕು ಎಂಬುದು ಇವರ ಮಾತು. 

ಇಷ್ಟೆಲ್ಲಾ ಸಾಧನೆ ಹಿಂದಿರುವುದು ನಮಿತಾ ಅವರ ಕ್ರಿಯಾಶೀಲತೆ ಮಾತ್ರವಲ್ಲ, ಜೊತೆಗೆ ಅವರ ಸೌಂದರ್ಯ ಪ್ರಜ್ಞೆ ಕೂಡಾ ಇದೆ. ಬ್ಯೂಟಿಫುಲ್ ನಮಿತಾ ತಮ್ಮ ಮುಖದ ತ್ವಚೆಗೆ ಮೊಸರು ಮತ್ತು ಕಡಲೆ ಹಿಟ್ಟನ್ನು ಬಳಸ್ತಾರಂತೆ. ಕಡಲೆಹಿಟ್ಟು ಮತ್ತು ಮೊಸರನ್ನು ದಪ್ಪಗಿನ ಪೇಸ್ಟ್ ಮಾಡಿದ ನಂತರ ಕಣ್ಣಿನ ಭಾಗ ಬಿಟ್ಟು ಮುಖದ ತುಂಬಾ ಹಚ್ಚಿಕೊಳ್ಳಬೇಕು. ಇದು ಸಂಪೂರ್ಣವಾಗಿ ಒಣಗಿದ ನಂತರ ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮುಖ ಬಿಳಿಯಾಗುವುದರೊಂದಿಗೆ ಕಾಂತಿಯುತವಾಗಲು ಸಹಕಾರಿಯಾಗುತ್ತಂತೆ. 

ಹಾಗೆಯೇ ಇವರು ತಮ್ಮ ಕೂದಲಿನ ರಕ್ಷಣೆಗೆ ಆಗಾಗ ಆಯಿಲ್ ಮಸಾಜ್ ಮಾಡ್ತಾರಂತೆ. ಇದು ಮಾನಸಿಕವಾಗಿ ಇವರಿಗೆ ರಿಲಾಕ್ಸ್​ ನೀಡುತ್ತಂತೆ. ಫ್ಯಾಷನ್​ ಪ್ರಿಯೆ ಆಗಿರುವ ನಮಿತಾ ಗೆಟಪ್‌, ಉಡುಗೆ ತೊಡುಗೆಗಳು ರಿಪೀಟ್​ ಆಗದಂತೆ ಎಚ್ಚರ ವಹಿಸ್ತಾರಂತೆ. ಹೆಲ್ತಿ ಆ್ಯಂಡ್ ಬ್ಯೂಟಿಫುಲ್ ತ್ವಚೆ ಇದ್ರೆ ಸಾಲದು, ಮುಖದಲ್ಲಿ ಮಂದಹಾಸ ಇರಬೇಕು ಅನ್ನೋದು ನಮಿತಾ ಮಾತು. 

Related Posts :

Category:

error: Content is protected !!