ರಂಗನಾಥಸ್ವಾಮಿ ದೇಗುಲಕ್ಕೆ ಸಚಿವ ರಾಮುಲು ಭೇಟಿ, ಕಾಯಕಲ್ಪದ ಭರವಸೆ

ಚಿತ್ರದುರ್ಗ: ಹೊಳಲ್ಕೆರೆ, ಹೊಸದುರ್ಗ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಇತ್ತೀಚೆಗೆ ಹಾನಿಗೊಳಗಾಗಿದ್ದ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲಕ್ಕೂ ಶ್ರೀರಾಮುಲು ಭೇಟಿ ನೀಡಿದ್ದಾರೆ.

ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿದು ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಹಾನಿಯಾಗಿತ್ತು. ಹೀಗಾಗಿ ದೇವಾಲಯಕ್ಕೆ ಭೇಟಿ ನೀಡಿದ ಸಚಿವರು ದೇವಾಲಯದ ಕಾಯಕಲ್ಪಕ್ಕೆ ಭರವಸೆ ನೀಡಿದ್ದಾರೆ. ಇನ್ನು ಇದೇ ವೇಳೆ ಕೆರೆ ಏರಿ ಹೊಡೆದ ನೀರಗುಂದ ಕೆರೆ, ಬೆಳೆನಾಶ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಪರಿಹಾರದ ಭರವಸೆ ನೀಡಿದ್ದಾರೆ. ಇದೇ ವೇಳೆ, ಸಾಣೇಹಳ್ಳಿ ಮಠಕ್ಕೆ ಭೇಟಿ‌ ನೀಡಿದ ಸಚಿವ ಶ್ರೀರಾಮುಲು, ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಅವರನ್ನ ಭೇಟಿ‌‌ ಮಾಡಿದರು.

ಘಟನೆ ಹಿನ್ನೆಲೆ:
ಬರದನಾಡು ಚಿತ್ರದುರ್ಗದಲ್ಲಿ ಒಂದೇ ಸಮನೆ ಮಳೆಯಾದ ಕಾರಣ ಬೃಹತ್ ಬೆಟ್ಟವೇ ಕುಸಿದಿತ್ತು. ಜೊತೆಗೆ ಬೆಟ್ಟದಲ್ಲಿದ್ದ ಪುರಾತನ ದೇಗುಲ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲಕ್ಕೆ ಹಾನಿಯಾಗಿತ್ತು. ಬೆಟ್ಟದ ಕೆಳಭಾಗದಲ್ಲಿನ ಹನುಮಪ್ಪ ದೇಗುಲಕ್ಕೂ ಹಾನಿಯಾಗಿತ್ತು. ಆದರೆ ಬೆಟ್ಟ ಕುಸಿತದ ನಡುವೆ ಅಚ್ಚರಿ ರೀತಿಯಲ್ಲಿ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲದ ಗರ್ಭಗುಡಿಯಲ್ಲಿದ್ದ ರಂಗನಾಥಸ್ವಾಮಿ ವಿಗ್ರಹ ಮಾತ್ರ ಉಳಿದುಕೊಂಡಿತ್ತು. ಇದು ಸುತ್ತಮುತ್ತಲಿನ ಜನಕ್ಕೆ ಭಾರಿ ಕುತೂಹಲ ಉಂಟುಮಾಡಿತ್ತು.

 

Related Posts :

Category:

error: Content is protected !!