ಗಾಯದ ವೇದನೆ ಮಧ್ಯೆಯೇ.. ಎಂಎಸ್​ ಧೋನಿ ಬಾಲಿವುಡ್​ಗೆ ಎಂಟ್ರಿ!?

ಮೂರು ಗಾಯದ ಮಹಾ ವೇದನೆಯಿಂದಲೇ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ತಂಡದಿಂದ ದೂರ ಉಳಿದಿದ್ದಾರೆ ಅನ್ನೋದು ಕ್ರಿಕೆಟ್​ ಪ್ರೇಮಿಗಳಿಗೆ ತಿಳಿದ ವಿಚಾರ. ಧೋನಿ ಗಾಯದ ಕಾರಣದಿಂದಲೇ ಟೀಮ್ ಇಂಡಿಯಾದಿಂದ ದೂರವಾಗಿದ್ದಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಹೀಗೆ ಟೀಮ್ ಇಂಡಿಯಾದಿಂದ ದೂರವಿರೋ ಧೋನಿ, ಬಾಲಿವುಡ್​​ಗೆ ಗ್ರೇಟ್ ಎಂಟ್ರಿ ಕೊಡೋಕೆ ಸಿದ್ಧತೆ ನಡೆಸಿಕೊಳ್ತಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿ ಬರೋದಕ್ಕೆ ಶುರುವಾಗಿದೆ.

ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಎಂಎಸ್​ಡಿ!
ವಿದಾಯದ ವಿಚಾರದಲ್ಲಿ ನಿಗೂಢ ಹೆಜ್ಜೆಯನ್ನಿಡ್ತೀರೋ ಧೋನಿ, ಸದ್ದಿಲ್ಲದೇ ಬಾಲಿವುಡ್​ಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. ಧೋನಿ ವಿಶ್ರಾಂತಿ ತಗೆದುಕೊಂಡಾಗಿನಿಂದ ಈ ಸುದ್ದಿ ಕೂಡ ಹರಿದಾಡ್ತಿತ್ತು. ಆದ್ರೆ ವಿದಾಯ ಚರ್ಚೆಗೆ ಮೌನ ವಹಿಸಿದಂತೆ, ಸಿನಿಮಾ ಫೀಲ್ಡ್​ಗೆ ಎಂಟ್ರಿ ಕೊಡೋ ಚರ್ಚೆಗೂ ಧೋನಿ ತುಟಿ ಪಿಟಿಕ್ ಎಂದಿರಲಿಲ್ಲ. ಆದ್ರೀಗ ಇದಕ್ಕೆ ಪುಷ್ಟಿ ನೀಡುವಂತ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹಾರಿದಾಡೋದಕ್ಕೆ ಶುರುವಾಗಿದೆ.

ಸಂಜು ಬಾಬಾ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಧೋನಿ?
ಮೂಲಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಮುನ್ನಾ ಬಾಯಿ ಸಂಜಯ್ ದತ್ ಜೊತೆಗೆ ಬಾಲಿವುಡ್​ ಸಿನಿಮಾದಲ್ಲಿ ಕಾಣಿಸಿಕೊಳ್ಳೋದಕ್ಕೆ ರೆಡಿಯಾಗ್ತಿದ್ದಾರೆ. ಸಂಜು ಬಾಬಾ ಡಾಗ್ ಹೌಸ್ ಅನ್ನೋ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೊಂದು ಮಲ್ಟಿ ಸ್ಟಾರ್​ರ ಸಿನಿಮಾ ಆಗಿದ್ದು ಸುನಿಲ್ ಶೆಟ್ಟಿ, ಮಾಧವನ್, ಇಮ್ರಾನ್ ಹಶ್ಮಿ ಜೊತೆ ಧೋನಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಏನ್ ಮಾಡ್ಬೇಕು ಅನ್ನೋದನ್ನ ಮೊದಲೇ ಪ್ಲಾನ್ ಮಾಡಿರ್ತಾರೆ. ಧೋನಿಯ ವಿದಾಯದ ಪ್ಲಾನ್ ರಂಗೀನ್ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡೋದು ಎನ್ನಲಾಗ್ತಿದೆ. ಈಗಾಗಲೇ ಧೋನಿ ಜೀವನಾಧಾರಿತ ಎಂಎಸ್​ಧೋನಿ ಅನ್​ಟೋಲ್ಡ್ ಸ್ಟೋರಿ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಾಗಿ ಸಿನಿಮಾ ಲೋಕದ ರುಚಿ ಧೋನಿಗೆ ಗೊತ್ತಿದೆ.

ಕೆಲವು ಮೂಲಗಳ ಪ್ರಕಾರ ಧೋನಿ, ಸಂಜು ಬಾಬಾ ಸಿನಿಮಾಕ್ಕೆ ಸೈನ್ ಮಾಡಿದ್ದಾರೆ ಎನ್ನಲಾಗ್ತಿದ್ರೂ, ಮಾಹಿ ಆಪ್ತರು ಮಾತ್ರ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗೇ ಜಿಮ್ ಸರ್ಬಾ ಕೂಡ ಧೋನಿಯನ್ನ ಒಂದು ಸಿನಿಮಾದಲ್ಲಿ ನಟಿಸೋದಕ್ಕೆ ಅಪ್ರೋಚ್ ಮಾಡಿದ್ದಾರೆ ಅನ್ನೋ ಟಾಕ್ ಬಾಲಿವುಡ್​ನಲ್ಲಿದೆ.

ಒಟ್ನಲ್ಲಿ ಧೋನಿ ತಾವೇ ಸಿನಿಮಾ ನಿರ್ಮಾಣ ಮಾಡೋ ಆಲೋಚನೆಯಲ್ಲಿದ್ರು. ಆದ್ರೀಗ ಮಾಹೀಗೆ ಸಿನಿಮಾದಲ್ಲಿ ನಟಿಸೋಕೆ ಭಾರಿ ಆಫರ್​ಗಳು ಬರ್ತಿವೆ. ಒಂದು ವೇಳೆ ಧೋನಿ ಏನಾದ್ರೂ ಸಿನಿಮಾ ಇಂಡಸ್ಟ್ರಿಗೆ ಬಂದ್ರೆ, ಬಾಲಿವುಡ್ ಮಂದಿ ರಡ್ ಕಾರ್ಪೆಟ್ ಹಾಸಿ ವೆಲ್​ಕಮ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ. (ಸಂಜಯ್, ಸ್ಪೋರ್ಟ್ಸ್ ಬ್ಯೂರೋ, ಟಿವಿ9)

Related Posts :

Category:

error: Content is protected !!