ನಾಸಾಗೂ ಸಿಗದ ವಿಕ್ರಮ್ ಲ್ಯಾಂಡರ್ ಸುಳಿವು

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡರ್​ ‘ವಿಕ್ರಮ್’ ಇಳಿಯಬೇಕಾಗಿದ್ದ ಸ್ಥಳದ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಆದ್ರೆ, ನಾಸಾ ಬಿಡುಗಡೆ ಮಾಡಿದ ಚಿತ್ರಗಳಲ್ಲೂ ಸಹ​ ‘ವಿಕ್ರಮ್’ ಲ್ಯಾಂಡರ್ ಪತ್ತೆಯಾಗಿಲ್ಲ.

‘ವಿಕ್ರಮ್’ ಕಠಿಣ ಲ್ಯಾಂಡಿಂಗ್​ನಿಂದ ಸಮಸ್ಯೆಯಾಗಿತ್ತು. ಹೀಗಾಗಿ ವಿಕ್ರಮ್ ಪತ್ತೆಗೆ ಇಸ್ರೋ ಜೊತೆಗೆ ನಾಸಾ ಸಹ ಕೈಜೋಡಿಸಿದೆ.  ಚಂದ್ರನ ಮೇಲೆ ಸುತ್ತುತ್ತಿರುವ ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್​ಆರ್​ಒ) ಸೆ.17ರಂದು ವಿಕ್ರಮ್ ಲ್ಯಾಂಡ್ ಆಗಬೇಕಿದ್ದ ಸ್ಥಳದ ಫೋಟೋಗಳನ್ನು ಸೆರೆಹಿಡಿದಿತ್ತು. ಅಂದು ದಕ್ಷಿಣ ಧ್ರುವದಲ್ಲಿ ನೆರಳಿದ್ದ ಕಾರಣ ಎಲ್​ಆರ್​ಒ ಕ್ಯಾಮರಾಗೂ ‘ವಿಕ್ರಮ್’ ಸಿಗಲಿಲ್ಲ. ಹೀಗಾಗಿ, ಅಕ್ಟೋಬರ್​ ತಿಂಗಳಲ್ಲಿ ಮತ್ತೆ ದಕ್ಷಿಣ ಧ್ರುವದ ಮೇಲೆ ನಾಸಾದ ಆರ್ಬಿಟರ್ ಹಾದು ಹೋಗಲಿದೆ. ಆಗ ದಕ್ಷಿಣ ಧ್ರುವದಲ್ಲಿ ಬೆಳಕಿದ್ದರೆ, ಲೂನಾರ್ ರೆಕನೈಸನ್ಸ್​ ಆರ್ಬಿಟರ್​ ಕ್ಯಾಮರಾಗೆ ‘ವಿಕ್ರಮ್’ ಸಿಗುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.

ಸೆ.7ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿದ್ದ ಚಂದ್ರಯಾನ-2ರ ‘ವಿಕ್ರಮ್’ ಲ್ಯಾಂಡರ್​ ಕೊನೆ ಕ್ಷಣದಲ್ಲಿ ಇಸ್ರೋ ವಿಜ್ಞಾನಿಗಳ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಅಂದಿನಿಂದ ‘ವಿಕ್ರಮ್’ ಲ್ಯಾಂಡರ್ ಪತ್ತೆಗೆ ವಿಜ್ಞಾನಿಗಳಿಂದ ಪ್ರಯತ್ನ ಮುಂದುವರಿದಿದೆ.

Related Posts :

Category:

error: Content is protected !!