ಇಮ್ರಾನ್ ವಿರುದ್ಧ ರೊಚ್ಚಿಗೆದ್ದ ಜನ, ಸರ್ಕಾರದ ಬೆಂಬಲಕ್ಕೆ ನಿಂತ ಸೇನೆ

Opposition protest Imran Khan resign, ಇಮ್ರಾನ್ ವಿರುದ್ಧ ರೊಚ್ಚಿಗೆದ್ದ ಜನ, ಸರ್ಕಾರದ ಬೆಂಬಲಕ್ಕೆ ನಿಂತ ಸೇನೆ

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ. ಧಾರ್ಮಿಕ ಮುಖಂಡ ಮೌಲಾನಾ ಫಜಲುರ್ ರೆಹಮಾನ್, ಪಾಕ್ ಪ್ರಧಾನಿಗೆ 48 ಗಂಟೆಗಳ ಗಡುವು ನೀಡಿದ್ದಾರೆ. ಆದ್ರೆ, ಆ ಡೆಡ್​​ಲೈನ್ ಇವತ್ತಿಗೆ ಅಂತ್ಯವಾಗಲಿದೆ. ಹೀಗಾಗಿ ಪ್ರಧಾನಿ ವಿರುದ್ಧ ಪ್ರತಿಭಟನಾಕಾರರು ಕೆಂಡ ಕಾರಿದ್ದಾರೆ.

ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ದಂಗೆದ್ದ ಜನ!
ಪಾಕಿಸ್ತಾನದ ರಾಜಧಾನಿ ಈಗ ನಿಗಿ ನಿಗಿ ಅಂತಿದೆ. ಎಲ್ಲೆಲ್ಲೂ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗುತ್ತಿವೆ. ಆಕ್ರೋಶ ಜ್ವಾಲೆಯಾಗಿ ಪರಿಣಮಿಸಿದೆ. ಲಕ್ಷಾಂತರ ಜನ ಇಮ್ರಾನ್ ಖಾನ್ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ. ಲಾಹೋರ್​​ನಿಂದ ಹಿಡಿದು ರಾಜಧಾನಿ ಇಸ್ಲಾಮಾಬಾದ್​ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಈಗಾಗ್ಲೇ ಶುಕ್ರವಾರವೇ ಧಾರ್ಮಿಕ ಮುಖಂಡ ಮೌಲಾನಾ ಫಜಲುರ್ ರೆಹಮಾನ್ ನೇತೃತ್ವದಲ್ಲಿ ಪ್ರತಿಭಟನೆ ಶುರುವಾಗಿದೆ. ಅಲ್ದೆ, ಆವತ್ತೇ ಪ್ರಧಾನಿ ಇಮ್ರಾನ್ ಖಾನ್‌ಗೆ ಅಧಿಕಾರದಿಂದ ಕೆಳಗಿಳಿಯಲು 48 ಗಂಟೆಗಳ ಡೆಡ್​​ಲೈನ್ ನೀಡಿದ್ರು. ಆ ಡೆಡ್​ಲೈನ್ ಇಂದಿಗೆ ಅಂತ್ಯವಾಗಲಿದೆ. ಹೀಗಾಗಿ, ಇಮ್ರಾನ್ ಖಾನ್ ರಾಜೀನಾಮೆ ಕೊಡದಿದ್ರೆ, ಪ್ರತಿಭಟನಾಕಾರರು ಮುಂದೇನು ಮಾಡ್ತಾರೆ ಅನ್ನೋ ಕುತೂಹಲ ಕೆರಳಿಸಿದೆ.

ಇಮ್ರಾನ್ ಪರ ನಿಂತರ ಪಾಕಿಸ್ತಾನ ಸೇನೆ!
ಕಳೆದ ವರ್ಷದ ಜುಲೈ 25ರ ಸಂಸತ್ ಚುನಾವಣಾ ಫಲಿತಾಂಶವು ಮೋಸದಿಂದ ಕೂಡಿದೆ. ಆ ಫಲಿತಾಂಶವನ್ನು ನಾವು ಒಪ್ಪಿಕೊಳ್ಳಲ್ಲ. ಇಮ್ರಾನ್ ಖಾನ್ ಪಾಕಿಸ್ತಾನದ ಗೊರ್ಬಚೆವ್ ಅಂತಾ ರೆಹಮಾನ್ ಕರೆದಿದ್ದಾರೆ. ಆದ್ರೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾತ್ರ ಪ್ರತಿಭಟನಾಕಾರರ ಬೇಡಿಕೆಗೆ, ಹೋರಾಟಕ್ಕೆ ಸೊಪ್ಪು ಹಾಕುತ್ತಿಲ್ಲ. ಅಷ್ಟೇ ಅಲ್ಲ, ನಿರೀಕ್ಷೆಯಂತೆ ಪಾಕಿಸ್ತಾನದ ಸೇನೆಯೂ ಇಮ್ರಾನ್ ಖಾನ್ ಸರ್ಕಾರವನ್ನು ಬೆಂಬಲಿಸಿದೆ. ಪಾಕಿಸ್ತಾನದಲ್ಲಿ ಯಾರೊಬ್ಬರು ಸರ್ಕಾರವನ್ನು ಅಸ್ಥಿರಗೊಳಿಸಲು, ಅರಾಜಕತೆ ಸೃಷ್ಟಿಸಲು ಬಿಡಲ್ಲ ಅಂತಾ ಸೇನಾ ವಕ್ತಾರ ಆಸೀಫ್ ಗಫೂರ್ ಹೇಳಿದ್ದಾರೆ. ಇದಿಷ್ಟೇ ಅಲ್ಲ, ಕಳೆದ ವರ್ಷದ ಜುಲೈನಲ್ಲಿ ಪಾಕ್ ಸಂಸತ್ ಚುನಾವಣೆ ನಡೆದಾಗಲೂ ಪಾಕ್ ಸೇನೆ ಇಮ್ರಾನ್ ಖಾನ್ ಪಕ್ಷವನ್ನ ಬೆಂಬಲಿಸಿತ್ತು.

ಪಾಕ್ ಜನರಿಗೆ ಕಾಶ್ಮೀರ ಸಮಸ್ಯೆ ಅಲ್ಲವೇ ಅಲ್ಲ!
ಪಾಕಿಸ್ತಾನದಲ್ಲಿ ಗಲುಪ್ ಇಂಟರ್ ನ್ಯಾಷನಲ್ ಸಂಸ್ಥೆ ಒಂದು ಸರ್ವೇ ನಡೆಸಿದೆ. ಅದ್ರಲ್ಲಿ ಶೇಕಡಾ 53 ರಷ್ಟು ಜನ ಪಾಕಿಸ್ತಾನದಲ್ಲಿ ಏರಿಕೆಯಾಗ್ತಿರುವ ಹಣದುಬ್ಬರದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಅಷ್ಟು ಬಿಟ್ರೆ, ಕಾಶ್ಮೀರ ಸಮಸ್ಯೆಯಲ್ಲ ಅಂದಿದ್ದಾರೆ. ಇನ್ನು, ಶೇಕಡಾ 23 ರಷ್ಟು ಜನರು ನಿರುದ್ಯೋಗವು ಹೆಚ್ಚು ಚಿಂತೆಗೀಡು ಮಾಡಿದೆ ಎಂದಿದ್ದಾರೆ. ಹಣದುಬ್ಬರ, ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸುವುದರ ಬದಲು ಪಾಕಿಸ್ತಾನವು ಕಾಶ್ಮೀರ ವಿಷಯ ಹಿಡಿದುಕೊಂಡು ಭಾರತದ ವಿರುದ್ಧ ಜಗಳಕ್ಕೆ ಇಳಿಯುತ್ತಿದೆ. ಇಂತಹ ಸರ್ಕಾರಕ್ಕೆ ಈಗ ಪಾಕ್‌ ಜನರೇ ಪಾಠ ಕಲಿಸುತ್ತಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!