ಬಗೆಹರಿದ ಅಯೋಧ್ಯೆ ಭೂ ವಿವಾದ: ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಸಮ್ಮತಿ

Ayodhya Ram mandir can be built says Supreme court, ಬಗೆಹರಿದ ಅಯೋಧ್ಯೆ ಭೂ ವಿವಾದ: ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಸಮ್ಮತಿ

ದೆಹಲಿ: ದಶಕಗಳಿಂದ ಕಾನೂನು ಕಗ್ಗಂಟಾಗಿದ್ದ ರಾಮಜನ್ಮ ಭೂಮಿ ಅಯೋಧ್ಯೆ ಭೂ ವಿವಾದ ಕುರಿತಾದ ಸುಪ್ರೀಂಕೋರ್ಟ್​ ತೀರ್ಪು ಹೊರಬಿದ್ದಿದೆ.
Ayodhya Ram mandir can be built says Supreme court, ಬಗೆಹರಿದ ಅಯೋಧ್ಯೆ ಭೂ ವಿವಾದ: ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಸಮ್ಮತಿ
‘‘ಶ್ರೀರಾಮನ ಜನ್ಮ ಭೂಮಿ ಇದಾಗಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬಹುದು’’ ಎಂದು ಸುಪ್ರೀಂಕೋರ್ಟ್​ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಸರ್ವಾನುಮತದ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಸುನ್ನಿ ವಕ್ಫ್​ ಮಂಡಳಿ, ಶಿಯಾ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ವಿರಾಜಮಾನ್ ನಡುವಿನ 2.77 ಎಕರೆ ಭೂ ವಿವಾದ ಬಗೆಹರಿದಿದೆ.

ವಿವಾದಿತ ಜಮೀನು ರಾಮಲಲ್ಲಾ ಪಾಲು:
ರಾಮಲಲ್ಲಾ ವಾದ ಎತ್ತಿ ಹಿಡಿದ ಕೋರ್ಟ್, ರಾಮಮಂದಿರ ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಬೇಕು. ರಾಮಮಂದಿರ ನಿರ್ಮಾಣದ ಹೊಣೆ ಕೇಂದ್ರ ಸರ್ಕಾರಕ್ಕೆ ವಹಿಸಲಾಗಿದೆ. ರಾಮಜನ್ಮ ಭೂಮಿಯ ಸ್ವಾಧೀನವನ್ನ ಟ್ರಸ್ಟ್​ಗೆ ನೀಡಬೇಕು ಎಂದು ಕೋರ್ಟ್​ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಇದೇ ವೇಳೆ, ಸುನ್ನಿ ವಕ್ಫ್​ಬೋರ್ಡ್​ಗೆ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಬೇಕು. ವಿಶೇಷ ಅಧಿಕಾರ ಬಳಸಿ ಸುನ್ನಿ ವಕ್ಫ್ ಬೋರ್ಡ್​ಗೆ ಜಮೀನು ನೀಡಬೇಕು. ಕೇಂದ್ರ ಸರ್ಕಾರ 3 ತಿಂಗಳ ಒಳಗಾಗಿ ಪರ್ಯಾಯ ಜಮೀನು ಹಂಚಿಕೆ ಬಗ್ಗೆ ಯೋಜನೆ ರೂಪಿಸಬೇಕು ಎಂದೂ ಸುಪ್ರೀಂಕೋರ್ಟ್​ ಸೂಚಿಸಿದೆ.

ಅಯೋಧ್ಯೆ ಭೂವಿವಾದ ಬಗ್ಗೆ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾ.ಶರದ್ ಅರವಿಂದ್ ಬೋಬ್ಡೆ, ನ್ಯಾ.ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾ. ಅಬ್ದುಲ್ ನಜೀರ್ ಅವರ ನ್ಯಾಯಪೀಠ ತೀರ್ಪು ನೀಡಿದೆ.

Ayodhya Ram mandir can be built says Supreme court, ಬಗೆಹರಿದ ಅಯೋಧ್ಯೆ ಭೂ ವಿವಾದ: ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಸಮ್ಮತಿ

Related Posts :

Leave a Reply

Your email address will not be published. Required fields are marked *