ದ್ವೇಷದಿಂದ ಪಾಯಲ್ ಕೊಲೆ: ಜಿಮ್ ಟ್ರೈನರ್ ಜೇಮ್ಸ್​ಗೆ ಜೀವಾವಧಿ ಜೈಲು

gym trainer james kumar murdered Techie Payal surekha cbi court, ದ್ವೇಷದಿಂದ ಪಾಯಲ್ ಕೊಲೆ: ಜಿಮ್ ಟ್ರೈನರ್ ಜೇಮ್ಸ್​ಗೆ ಜೀವಾವಧಿ ಜೈಲು

ಬೆಂಗಳೂರು: ಗಂಡನ ಮೇಲಿನ ದ್ವೇಷಕ್ಕೆ ಟಿಕ್ಕಿ ಪತ್ನಿ ಪಾಯಲ್ ಸುರೇಖಾ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ಜೇಮ್ಸ್​ಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದೆ.

gym trainer james kumar murdered Techie Payal surekha cbi court, ದ್ವೇಷದಿಂದ ಪಾಯಲ್ ಕೊಲೆ: ಜಿಮ್ ಟ್ರೈನರ್ ಜೇಮ್ಸ್​ಗೆ ಜೀವಾವಧಿ ಜೈಲು ಜೆ.ಪಿ. ನಗರದಲ್ಲಿ 2010 ರ ಡಿಸೆಂಬರ್ ನಲ್ಲಿ ಅಸ್ಸಾಂ ಮೂಲದ ಪಾಯಲ್ ಸುರೇಖಾ ಅವರ ಹತ್ಯೆ ನಡೆದಿತ್ತು. ಜಿಮ್ ಟ್ರೈನರ್ ಜೇಮ್ಸ್ ಕುಮಾರ್ ರಾಯ್ ಮೇಲೆ ಕೊಲೆ ಆರೋಪ ಕೇಳಿಬಂದಿತ್ತು. ಪ್ರಕರಣದ ಕುರಿತು ಬೆಂಗಳೂರಿನ ಸಿಬಿಐ ಕೋರ್ಟ್ ಇಂದು ತೀರ್ಪು ನೀಡಿದೆ. ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿತ್ತು.

ಪತಿ ಮೇಲಿನ ದ್ವೇಷಕ್ಕೆ ಪಾಯಲ್ ಸುರೇಖಾ ಅವರನ್ನ ಜಿಮ್ ಟ್ರೈನರ್ ಜೇಮ್ಸ್ ಕೊಲೆ ಮಾಡಿದ್ದ ಎಂಬ ಆರೋಪದ ಮೇಲೆ ಅಂದಿನ ಇನ್ಸ್ ಪೆಕ್ಟರ್ ಕೆ. ಉಮೇಶ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸಿತ್ತು.

ಆರೋಪಿಯೇ ಸಿಬಿಐ ತನಿಖೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಸಿಬಿಐ ಕೂಡಾ ಜೇಮ್ಸ್ ವಿರುದ್ಧವೇ ಆರೋಪಪಟ್ಟಿ ದಾಖಲಿಸಿತ್ತು. ಸಿಬಿಐ ಪರ ಎಸ್ ಪಿಪಿ ಶಿವಾನಂದ ಪೆರ್ಲ ವಾದಿಸಿದ್ದರು.

ಪ್ರಕರಣದ ವೃತ್ತಾಂತ:

ಜೆಪಿ ನಗರದಲ್ಲಿ 2010ರ ಡಿಸೆಂಬರ್ ನಲ್ಲಿ ನಡೆದಿದ್ದ ಕೊಲೆ ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿದ್ದ ಕೊಲೆ ಪ್ರಕರಣಬೆಂಗಳೂರು ಪೊಲೀಸರಿಂದ ಆರೋಪಿ ಜೆಮ್ಸ್​ನ ಬಂಧನಅಂದಿನ ಇನ್ಸ್​ಪೆಕ್ಟರ್​ ಎಸ್​.ಕೆ.ಉಮೇಶ್​ ಬಂಧಿಸಿದ್ದರು. ಆದ್ರೆ ಆರೋಪಿ ಆತ ಅಲ್ಲ ಎಂದು ಕೊಲೆಯಾದ ಸುರೇಖಾ ತಂದೆ ಆರೋಪ ಮಾಡಿದ್ದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ತಂದೆ ದೀನ್​ದಯಾಳ್​ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ್ದರು. ಬೆಂಗಳೂರು ಪೊಲೀಸರ ತನಿಖೆ ಸರಿ ಇಲ್ಲವೆಂದೂ, ಸುರೇಖಾಳ ಗಂಡನೇ ಕೊಲೆ ಮಾಡಿದ್ದಾನೆ ಎಂದು ಸುರೇಖಾ ಪೋಷಕರು ಆರೋಪಿಸಿದ್ದರು. ಪೋಷಕರ ಒತ್ತಡದಿಂದ ತನಿಖೆಯನ್ನ ಸಿಬಿಐಗೆ ಒಪ್ಪಿಸಲಾಗಿತ್ತು. ಇದೀಗ ಸಿಬಿಐ ತನಿಖೆಯಿಂದ ಜೇಮ್ಸ್​ ಆರೋಪಿ ಎಂದು ಸಾಬೀತಾಗಿದ್ದು, ಈ ಮೂಲಕ ಬೆಂಗಳೂರು ಪೊಲೀಸರ ತನಿಖೆ ಸರಿ ಎಂಬುದೂ ಇದೀಗ ಸಾಬೀತಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!