ಗನ್ ಕೆಳಗಿಟ್ಟು, ಬಿಳಿ ಬಟ್ಟೆ ತೋರಿಸಿ ತನ್ನ ಸೈನಿಕರ ಶವ ತೆಗೆದುಕೊಂಡ ಹೋದ ಪಾಕ್​

ಗಡಿಯಲ್ಲಿ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದ ಇಬ್ಬರು ಪಾಕ್ ಸೈನಿಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಹಾಜಿಪುರ ಸೆಕ್ಟರ್​ನಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಯೋಧರ ಘರ್ಜನೆಗೆ ಪಾಕ್ ಸೈನಿಕರು ಮಟಾಷ್​ ಆಗಿದ್ದಾರೆ.

ತನ್ನ ಸೈನಿಕರ ಶವಗಳನ್ನು ತೆಗೆದುಕೊಂಡು ಹೋಗಲು ಬಂದ ಪಾಕಿಸ್ತಾನ ದಾಳಿ ನಡೆಸದಂತೆ ಭಾರತೀಯ ಸೈನಿಕರ ಕಡೆ ಬಿಳಿಯ ಬಟ್ಟೆಯನ್ನು ಪ್ರದರ್ಶಿಸಿದೆ. ತನ್ನ ಕೈನಲ್ಲಿರುವ ಬಂದೂಕುಗಳನ್ನು ಕೆಳಗಿಟ್ಟು, ಬಿಳಿಯ ತೋರಿಸಿ ಮೃತದೇಹಗಳನ್ನು ತೆಗೆದುಕೊಂಡು ಹೋಗಿದೆ. ಈ ರೀತಿ ಬಿಳಿಯ ಬಟ್ಟೆಯನ್ನು ತೋರಿಸುವುದು ನಾವು ಶರಣಾಗಿದ್ದೇವೆ ಅಥವಾ ದಾಳಿಯನ್ನು ನಿಲ್ಲಿಸೋಣ ಎಂಬ ಅರ್ಥವನ್ನು ನೀಡುತ್ತದೆ.

 

Related Posts :

Category:

error: Content is protected !!